A poem- About me

ನನ್ನ ದಾರಿ ನನಗೆ ಎಂದು ಗಡಿಯ ತೊಡೆದು ಹೊರಟೆನು
ಕಿರಿದಾರಿಯ ಕ್ರಮಿಸಿ ಹೆದ್ದಾರಿಯನ್ನು ತುಳಿದೆನು
ಒಬ್ಬಂಟಿಯು ನಾನು ಎಂಬ ಕಟು ಸತ್ಯವ ಮರೆಯಲು
'ಸ್ಪಷ್ಟ ಗುರಿಯ ಪಥಿಕಗೆಂದೂ ಪಥವೇ ಸಾಥಿ' ಎಂದೆನು
ದಾರಿಯಲ್ಲಿ ಸಾಗುತಿದ್ದ ಮಂದಿಯನ್ನು ನೋಡುತ
ಹಿಂದಿಕ್ಕುವ ತವಕದಲ್ಲಿ ಗುರಿಯ ಕಳೆದುಕೊಂಡೆನು
ಕ್ರಮಿಸಿ ಬಂದ ದಾರಿ ನೋಡಿ 'ನನ್ನದಲ್ಲ'ವೆನಿಸಲು
ಸದಾ ಮೌನಿ ನನ್ನ ಮನಸು ಮಾತನಾಡತೊಡಗಿತು :-

"ಗುರಿಯು ಒಂದು ದಿಗಂತವು; ಪಥವದತಿ ಅನಂತವು
ದಾರಿಗುಂಟ ಗುರುವಿದ್ದರೆ ಗುರಿಯು ಬರಿ ನಿತಾಂತವು
ಪಥಿಕ ಮಂದಿ ಗೆಳೆತನವದು ಬಹು ಶಕ್ತಿಯ
ಕೊಡುವುದು
ಕ್ರಮಿಸಿದಂತೆ ಕಠಿಣ ದಾರಿ ತಲ್ಪ-ಲತೆಗಳೆನಿಪವು"

-ಇದನೆ ನಂಬಿ ಸಾಗುತಿಹೆನು ಇಂದೂ ನಾನು ಗೆಳೆಯರೇ!
ಆತ್ಮಸ್ಥೈರ್ಯ, ಸ್ವಂತ ದೃಷ್ಟಿ, ಸದ್ಭಾವದಿಂದ. ಜೊತೆಗೆ,
ನಡಿಗೆ ವೇಗ ವರ್ಧಿಸುತ್ತ ಬಲು ದೂರವ ಕ್ರಮಿಸುವೆ
ಹೆಜ್ಜೆ ಗುರುತು ಅಳಿಯೋ ಮೊದಲು ಹೊಸಹೆಜ್ಜೆಯನಿಕ್ಕುವೆ

Comments

Popular posts from this blog

Venugopalaswamy temple & KRS backwaters.

Does 'she' need reservation?

Am I really busy?